ಉಪ್ಪಿನಂಗಡಿ: ಜೀಪು ಹಾಗೂ ಥಾರ್ ಜೀಪಿನ ಮಧ್ಯೆ ಢಿಕ್ಕಿಯಾಗಿ ಜೀಪು ಪಲ್ಟಿಯಾದ ಘಟನೆ ಉಪ್ಪಿನಂಗಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ಜೀಪಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ... ಢಿಕ್ಕಿಯ ತೀವೃತೆಗೆ ಜೀಪು ಹೆದ್ದಾರಿಯಲ್ಲಿ ನೆಕ್ಕಿಲಾಡಿಯತ್ತ ಮುಖಮಾಡಿ ಮಗುಚಿ ಬಿದ್ದಿದೆ. ಅಪಘಾತದಿಂದ ಥಾರ್ ಜೀಪಿನ ಮುಂಭಾಗ ಹಾಗೂ ಜೀಪು ಜಖಂಗೊಂಡಿದೆ. ಥಾರ್ ಜೀಪನ್ನು ಕಾವಳಕಟ್ಟೆಯ ಮುಹಮ್ಮದ್ ಅಕ್ರಂ ಚಲಾಯಿಸುತ್ತಿದ್ದರು. ಅಪಘಾತದ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೊಂದಲಕ್ಕೆ ಕಾರಣವಾಗುತ್ತಿರುವ ಹೆದ್ದಾರಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈ ಭಾಗದಲ್ಲಿ ಭಾಗಶಃ ಪೂರ್ಣಗೊಂಡಿದೆ. ಇದರಿಂದ ಇಲ್ಲಿ ವಾಹನಗಳು ಅತೀ ವೇಗವಾಗಿ ಸಾಗುತ್ತಿವೆ.