Vaibhav Sooryavanshi: ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಹೆಗಲಿಗೆ ಇದೀಗ ದೊಡ್ಡ ಜವಾಬ್ದಾರಿಯನ್ನು ಹೊರಿಸಲಾಗಿದ್ದು, ಬಿಹಾರದ ಹಿರಿಯ ಕ್ರಿಕೆಟ್ ತಂಡದ ಕ್ಯಾಪ್ಟನ. ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಎಚ್ಚರಿಕೆಯ ಸಲಹೆಯನ್ನು ಮರೆತು ವೈಭವ್ಗೆ ಈ ಸ್ಥಾನ ನೀಡಿರುವುದು ಸದ್ಯ ಕ್ರಿಕೆಟ್ ಪ್ರೇಮಿಗಳ ಹುಬ್ಬೇರಿಸಿದೆ.ಕ್ಯಾಪ್ಟನ್ ವೈಭವ್ ಸೂರ್ಯವಂಶಿತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಹಿರಿಯರ ತಂಡವನ್ನು ಮುನ್ನಡೆಸುವ ಅವಕಾಶ 15 ವರ್ಷದ ವೈಭವ್ಗೆ ಸಿಕ್ಕಿದೆ. ನವೆಂಬರ್ 14ರಿಂದ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ 17 ಸದಸ್ಯರ ತಂಡವನ್ನು ವೈಭವ್ಗೆ ವಹಿಸಲಾಗಿದ್ದು, ಸೂರಜ್ ಕಶ್ಯಪ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.