ಬೆಂಗಳೂರು: ಮುಂದಿನ ವಿಧಾನಮಂಡಲ ಅಧಿವೇಶನದೊಳಗೆ ಸಂಪುಟಕ್ಕೆ ಮಹಿಳಾ ಶಾಸಕಿಯೊಬ್ಬರು ಸೇರ್ಪಡೆ ಆಗುವುದು ಖಚಿತವಾಗಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಗೃಹಲಕ್ಷ್ಮಿ ಲಾನುಭವಿಗಳ ಜತೆ ಶುಕ್ರವಾರ ಆಯೋಜಿಸಿ. ಸಂಪುಟಕ್ಕೆ ಸಣ್ಣ ಸರ್ಜರಿ ನಡೆಯುತ್ತದೆಯೇ ಎಂಬ ಚರ್ಚೆಯೂ ಕಾಂಗ್ರೆಸ್ ಪಾಳಯದಲ್ಲಿ ಆರಂಭವಾಗಿದೆ.ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದಿದ್ದು, ಮಹಿಳಾ ಮಂತ್ರಿ ಇಲ್ಲದ ವಿಚಾರ ವಿವಿಧ ಸಂದರ್ಭದಲ್ಲಿ ಮುನ್ನೆಲೆಗೆ ಬರುತ್ತಿದೆ. ಗಾಯತ್ರಿ ಶಾಂತೇಗೌಡರ ಕೈಗೆ ಬಂದ ಅವಕಾಶ ತಪ್ಪಿ ಹೋಗಿತ್ತು. ಇದೀಗ ಬೆಳಗಾವಿ ಗ್ರಾಮೀಣ ಶಾಸಕಿ, ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ನಡುವೆ ಪೈಪೋಟಿ ಇದ್ದು ಇಬ್ಬರೂ ತಮ್ಮ-ತಮ್ಮ ನೆಲೆಯಲ್ಲಿ ಲಾಬಿ ನಡೆಸಿದ್ದಾರೆ.