‘ಅಯ್ಯನ ಮನೆ 2’ ವೆಬ್ ಸರಣಿಯಲ್ಲಿ ನಟಿ ಖುಷಿ ಚಂದ್ರಶೇಖರ್ ಅವರು ಅಭಿನಯಿಸಿದ್ದಾರೆ. ಚಿತ್ರರಂಗದಲ್ಲಿ ನಟಿಯಾಗಿ ಬ್ಯುಸಿ ಆಗಬೇಕು ಎಂಬ ಆಸೆ ಅವರಿಗೆ ಇದೆ. ಆಡಿಷನ್ ಮೂಲಕ ಅವರು ಪಾತ್ರಗಳನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಖುಷಿ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ನಾನು ಸಿಹಿ-ಕಹಿ ಚಂದ್ರು ಮತ್ತು ಗೀತಾ ಅವರ ಮಗಳು, ಹಿತಾನ ತಂಗಿ, ಕಿರಣ್ ನನ್ನ ಭಾವ ಎಂಬುದೆಲ್ಲ ಸರಿ. ಆದರೆ ನಾನು ಅವರ ಗುರುತನ್ನು ನನ್ನ ಗುರುತಾಗಿ ಮಾಡಿಕೊಳ್ಳೋಕೆ ಆಗಲ್ಲ. ಆ ರೀತಿ ಮಾಡಿಕೊಳ್ಳಲು ನನಗೆ ಇಷ್ಟ ಇಲ್ಲ. ಅವರ ಪ್ರಭಾವ ಬಳಸಿ ನಾನು ಅವಕಾಶ ಪಡೆಯಲ್ಲ. ನಾನು ಮಾಡಿರುವ ಚಿಕ್ಕ ಪ್ರಾಜೆಕ್ಟ್ ಕೂಡ ಆಡಿಷನ್ ಮೂಲಕವೇ.