ಯುವಕನೋರ್ವನ ತಂಗಿಯ ಮದುವೆ ಹಿನ್ನೆಲೆಯಲ್ಲಿ ಲಗ್ನ ಪತ್ರಿಕೆ ತೆಗೆದುಕೊಂಡು ಹೋಗುತ್ತಿದ್ದು, ಈ ವೇಳೆ ಬೈಕ್ ಮೇಲಿಂದ ಲಗ್ನ ಪತ್ರಿಕೆ ಬಂಡಲ್ ರಸ್ತೆಗೆ ಬಿದ್ದಿದೆ. ಪರಿಣಾಮ ಪೀಣ್ಯ ಫ್ಲೈ ಓವರ್ ಮೇಲೆ ಲಗ್ನ ಪತ್ರಿಕೆಗಳು ಚೆಲ್ಲಾಪಿಲ್ಲಿಯಾಗಿದ್ದು, ಕೂಡಲೇ ಸಾರ್ವಜನಿಕರು ಯುವಕನ ಸಹಾಯಕ್ಕೆ ದಾವಿಸಿ ರಸ್ತೆ ತುಂಬ ಬಿದ್ದಿದ್ದ ಲಗ್ನ ಪತ್ರಿಕೆಗಳನ್ನು ಎತ್ತಿ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರ ಕಾರ್ಯಕ್ಕೆ ಸಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳು ವ್ಯಕ್ತವಾಗಿವೆ.