‘ಅನಂತಪಯಣ’ ಸಿನಿಮಾಗೆ ಶ್ರೀಕಾಕ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಿವಿಷ್ಕಾ ಪಾಟೀಲ್, ಶ್ರೀಕಾಕ, ಬಲ ರಾಜವಾಡಿ, ಮಂಜುನಾಥ್ ಹೆಗ್ಡೆ, ಲಕ್ಷ್ಮಿ ಸಿದ್ದಯ್ಯ, ಎಂ.ಕೆ. ಮಠದ್, ಪ್ರಶಾಂತ್ ಸಿದ್ದಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಬೆಳಗಾವಿ, ಬೆಂಗಳೂರು, ಮಹಾರಾಷ್ಟ್ರದಲ್ಲಿ ಶೂಟಿಂಗ್ ಮಾಡಲಾಗಿದೆ. ಬೆಳಗಾವಿಯ ಸಂತೋಷ್ ಹೆಗಡೆ ಅವರ ನಿರ್ಮಾಣ ಮಾಡಿರುವ ‘ಅನಂತಪಯಣ’ ಸಿನಿಮಾದಿಂದ ಹೊಸ ಹಾಡು ಬಿಡುಗಡೆ ಆಗಿದೆ. ‘ನನ್ನ ಕಂಬಳಿ..’ ಎಂಬ ಈ ರೊಮ್ಯಾಂಟಿಕ್ ಗೀತೆಯನ್ನು ಸತೀಶ್ ಜಾರಕಿಹೊಳಿ ಅವರು ಬಿಡುಗಡೆ ಮಾಡಿದ್ದಾರೆ. ಗಡಿನಾಡು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಅದ್ದೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಈ ಹಾಡನ್ನು ಅನಾವರಣ ಮಾಡಲಾಯಿತು.