‘ಲಾರ್ಡ್ ಗಾಗ’ ಸಿನಿಮಾದಲ್ಲಿ ಶೂನ್ಯ, ಸ್ವರೂಪಿಣಿ, ದಿಶಾ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಕನ್ನಡದ ಈ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಮುಕಿ ರೆಘುನಾಥನ್ ಅವರು ಬಂಡವಾಳ ಹೂಡಿದ್ದು, ನಿರ್ದೇಶಕ ವೈ.ಕೆ. ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರದ ಟೀಸರ್ ಗಮನ ಸೆಳೆದಿದೆ. ಚಂದನವನದಲ್ಲಿ ಕೆಲವು ಸಿನಿಮಾಗಳು ಸ್ಟಾರ್ ಕಲಾವಿದರಿಂದ ಹಾಗೂ ಬಿಗ್ ಬಜೆಟ್ ಕಾರಣದಿಂದ ಗಮನ ಸೆಳೆದರೆ, ಇನ್ನು ಕೆಲವು ಸಿನಿಮಾಗಳು ತಮ್ಮ ಡಿಫರೆಂಟ್ ಶೀರ್ಷಿಕೆ ಹಾಗೂ ಅಪರೂಪದ ಕಥಾವಸ್ತುವಿನ ಕಾರಣದಿಂದ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ. ಇತ್ತೀಚೆಗೆ ಹೀಗೆ ತನ್ನ ಟೈಟಲ್, ಕಂಟೆಂಟ್ ಮತ್ತು ಪ್ರೆಸಂಟೇಷನ್ ಮೂಲಕ ಗಮನ ಸೆಳೆಯುತ್ತಿರುವ ಚಿತ್ರ ‘ಲಾರ್ಡ್ ಗಾಗ’.