ಕಲಬುರಗಿ: ಹಳ್ಳಿಗಳ ಜನಪದ ಜೀವನದಲ್ಲಿ ಜ್ಞಾನ, ವಿಜ್ಞಾನ ಅಡಗಿದೆ. ನೀರು ಮತ್ತು ಪರಿಸರವೇ ಆರೋಗ್ಯದ ಗುಟ್ಟು ಎಂದು ಪರಿಸರ ಕಾರ್ಯಕರ್ತ ಶಿವಾನಂದ ಕಳವೆ ಹೇಳಿದರು.ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲ. ಕಾಲುದಾರಿಗಳಲ್ಲಿ ಸಂಚರಿಸುತ್ತಲೇ ನಮ್ಮ ಹಿರಿಯರು ಅನೇಕ ವಿಷಯ ಕಲಿತಿದ್ದಾರೆ. ಇಂದು ತಂತ್ರಜ್ಞಾನ ಮತ್ತು ಆಧುನಿಕ ಸೌಲಭ್ಯಗಳಿಂದ ನಾವು ಸಾಕಷ್ಟು ಬೆಳೆದಿದ್ದೇವೆ. ಆದರೆ ನೆರೆಮನೆಯವರೊಂದಿಗೆ ಮಾನವೀಯ ಸಂಬಂಧ ಬೆಳೆಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.ನಮ್ಮ ನಾಡಿನಲ್ಲಿ ಹಿಂದೆ ನಿರ್ಮಿಸಲಾದ ಕೆರೆಕಟ್ಟೆ, ವಾಡೆ, ಜಲಸಂರಕ್ಷಣಾ ವ್ಯವಸ್ಥೆ ಮತ್ತು ವಾಸ್ತುಶಿಲ್ಪದ ವೈಶಿಷ್ಠಗಳು ಇಂದಿನ ಇಂಜಿನಿಯರಿಂಗ್ ಜ್ಞಾನಕ್ಕೂ ಸವಾಲಾಗುವಂತಿವೆ. ಆದರೆ ನಿಜವಾದ ಸುಧಾರಣೆಯತ್ತ ಇನ್ನಷ್ಟು ಗಮನ ಹರಿಸಬೇಕಾಗಿದೆ.