ಬಸವಕಲ್ಯಾಣ: ಮಾನವ ಜಗತ್ತನ್ನು ಪಲ್ಲಟಗೊಳಿಸುತ್ತಿರುವ ಆಧುನಿಕ ತಂತ್ರಜ್ಞಾನದ ಶಕ್ತಿ ಮತ್ತು ಮಿತಿಗಳ ಕುರಿತು ವಿಮರ್ಶೆ ನಡೆಯಬೇಕಾದ ಅಗತ್ಯವಿದ್ದು, ಯಾವುದಕ್ಕೆ ತಂತ್ರಜ್ಞಾನದ ಬಳಕೆಯಾಗುತ್ತಿದೆ ಎಂ. ಅಭಿಪ್ರಾಯಪಟ್ಟರು.ನಗರದ ಬಿಕೆಡಿಬಿ ಸಭಾಂಗಣದಲ್ಲಿ ಶ್ರೀ ಬಸವೇಶ್ವರ ಪದವಿ ಕಾಲೇಜಿನಿಂದ ಬುಧವಾರ ಹಮ್ಮಿಕೊಂಡಿದ್ದ ಅರಿವಿನ ಪಯಣ&2026 ಶೈಕ್ಷಣಿಕ ಚಟವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನದ ಬಳಕೆ ಜ್ಞಾನ, ಅಭಿವೃದ್ಧಿ ಮತ್ತು ಕೌಶಲದ ಬೆಳವಣಿಗೆಗೆ ಸಹಾಯಕವಾಗಿದೆ. ವಾಟ್ಸಾಪ್, ಇನ್ಸ್ಟಾಗ್ರಾಮ್, ಟ್ವಿಟ್ಟರ್, ಚಾಟ್ ಜಿಪಿಟಿ ಮೊದಲಾದ ತಂತ್ರಜ್ಞಾನ ಮಾಹಿತಿ ಜ್ಞಾನಕ್ಕಾಗಿ ಬಳಕೆಯಾಗಲಿ ಮನರಂಜನೆಗಲ್ಲ ಎಂದರು.ಸಮಯಪ್ರಜ್ಞೆ, ಶಿಸ್ತು, ಕ್ರಿಯಾಶೀಲತೆ, ಬದ್ಧತೆ ಮತ್ತು ಸತತ ಅಧ್ಯಯನ ಅಭಿವೃದ್ಧಿಗೆ ಮಾರ್ಗವಾಗಿದೆ.