ವಿಧ ಬರಹದಲ್ಲಿ ನಾವು ಬದುಕಲೇ ಬೇಕು ಎಂದರೆ ಅದನ್ನು ಯಾರಿಂದಲ್ಲೂ ತಪ್ಪಿಸಲು ಸಾಧ್ಯವಿಲ್ಲ, ಸಾವನ್ನು ನಾವು ಅರಸಿದರು, ಆಯುಷ್ಯ ಮುಗಿಯುವರೇ ಯಾವುದೋ ಒಂದು ರೂಪದಲ್ಲಿ ಪಾರಾಗುತ್ತೇವೆ ಎಂಬುದಕ್ಕೆ ದಕ್ಷಿಣ ಕನ್ನಡದಲ್ಲಿ ನಡೆದ ಘಟನೆಯೇ ಸಾಕ್ಷಿ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಗೆ ಆತ್ಮಹತ್ಯೆ ಮಾಡಿಕೊಳ್ಳು ಹಾರಿದ ಉಡುಪಿಯ ರೇಖಾ ಎಂಬ ಮಹಿಳೆ ಮೊಸಳೆ ದಾಳಿಯಿಂದಲೂ ಪಾರಾಗಿ ಜೀವಂತವಾಗಿ ಬದುಕಿ ಬಂದಿದ್ದಾರೆ. ಮಂಗಳೂರು, ನ.6: "ಸಾವು ತನಗೆ ಬೇಕೆನಿಸಿದಾಗ ಬರುವುದಿಲ್ಲ, ವಿಧಿ ಬರೆದ ಆಯುಷ್ಯ ಮುಗಿಯದೇ ಯಾರ ಜೀವವೂ ಹೋಗುವುದಿಲ್ಲ" ಎಂಬ ಮಾತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾಕ್ಷಿಯೊಂದು ದೊರೆತಿದೆ.