ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದ್ರೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಬಗ್ಗೆ ಮತದಾರರ ಪಟ್ಟಿ ರಾಜ್ಯ ಸರ್ಕಾರವನ್ನು ಗೊಂದಲ ಸಿಲುಕಿಸಿದೆ. ಹೌದು...ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಇಂದು (ನವೆಂಬರ್ 05) ನಡೆದ ಸಚಿವ ಸಂಪುಟದಲ್ಲಿ ಮಹತ್ವದ ಚರ್ಚೆ ನಡೆದಿದ್ದು, ಎಸ್ಐಆರ್ ಪೂರ್ವ ಮತಪಟ್ಟಿ ಬಳಸಬೇಕೋ ಅಥವಾ SIR ಬಳಿಕದ ಪಟ್ಟಿ ಬಳಸಬೇಕೋ ಎನ್ನುವ ಗೊಂದಲಕ್ಕೀಡಾಗಿದೆ.