ಬಾಗಲಕೋಟೆಯ ವಾಂಬೆ ಕಾಲೋನಿಯಲ್ಲಿ ಬಡವರಿಗಾಗಿ ನಿರ್ಮಿಸುತ್ತಿರುವ 500 ಮನೆಗಳ ಯೋಜನೆ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಕಳಪೆ ಕಾಮಗಾರಿಯಿಂದ ಹಲವು ಮನೆಗಳು ಈಗಾಗಲೇ ಶಿಥಿಲಾವಸ್ಥೆ ತಲುಪಿವೆ. ಫಲಾನುಭವಿಗಳು ಹಣ ಪಾವತಿಸಿದ್ದರೂ ವಾಸಕ್ಕೆ ಮನೆಗಳಿಲ್ಲದೆ ಪರದಾಡುತ್ತಿದ್ದಾರೆ. ಅರ್ಧಕ್ಕೆ ನಿಂತಿರುವ ಈ ಮನೆಗಳು ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. ಬಾಗಲಕೋಟೆ, ನ.5: ಜಿಲ್ಲೆಯ ಬಡ ಕೊಳಚೆ ಪ್ರದೇಶದ ನಿವಾಸಿಗಳಿಗಾಗಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸುತ್ತಿರುವ ಸುಮಾರು 500 ಮನೆಗಳ ಯೋಜನೆ ನಾಲ್ಕು ವರ್ಷಗಳಾದರೂ ಪೂರ್ಣಗೊಂಡಿಲ್ಲ. 2022ರಲ್ಲಿ ಅಂದಿನ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸಿದ್ದ ಈ ಮನೆಗಳು ಇಂದಿಗೂ ಅರ್ಧಕ್ಕೆ ನಿಂತಿವೆ.