ಸರ್ಕಾರಿ ನೌಕರಿಗಾಗಿ ಅಭ್ಯರ್ಥಿಗಳು ಅಡ್ಡದಾರಿ ಹಿಡಿಯುತ್ತಿರುವುದು ಹೆಚ್ಚಾಗಿದೆ. ಹೀಗಾಗಿ ಸರ್ಕಾರಿ ಉದ್ಯೋಗ ಪಡೆಯಲು ಅಡ್ಡದಾರಿ ಹಿಡಿಯುವವರಿಗೆ ಕೆಇಎ ಈಗ ಬಿಸಿ ಮುಟ್ಟಿಸಿದೆ. ಪರೀಕ್ಷೆಯಲ್ಲಿ ಅಕ್ರಮ ಎಸಗಿ ಸಿಕ್ಕಿಬಿದ್ದರೆ ಕೇವಲ ಆ ಪರೀಕ್ಷೆಯಿಂದಷ್ಟೇ ಅಲ್ಲ, ಭವಿಷ್ಯದಲ್ಲಿ ನಡೆಯುವ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೂ ಶಾಶ್ವತ ನಿಷೇಧ ಹೇರಲು ಮುಂದಾಗಿದೆ. ಅಷ್ಟಕ್ಕೂ ಕೆಇಎ ಕೈಗೊಂಡಿರೋ ಈ ಕಠಿಣ ಕ್ರಮಗಳೇನು ಎನ್ನುವ ಕಂಪ್ಲೀಟ್ ಡೀಟೇಲ್ಸ್. ಬೆಂಗಳೂರು, ನವೆಂಬರ್ 05): ಸರ್ಕಾರಿ ಕೆಲಸ ಬೇಕು. ಆದ್ರೆ, ಪರೀಕ್ಷೆಯಲ್ಲಿ ಪಾಸಾಗುವ ನಂಬಿಕೆ ಇಲ್ಲ, ಹಾಗೇ ಓದೋಕೆ ತಾಳ್ಮೆ ಇಲ್ಲ. ಹೀಗಾಗಿ ಪರೀಕ್ಷೆಯಲ್ಲಿ ಪಾಸ್ ಆಗಲು ಅಡ್ಡದಾರಿ ಹಿಡಿಯೋ ಪ್ಲಾನ್ ಮಾಡುವ ಅಕ್ರಮಕೋರರಿಗೆ ಕೆಇಎ ಈಗ ಶಾಕ್ ಕೊಟ್ಟಿದೆ.