ಕೊಪ್ಪಳದಲ್ಲಿ ಪ್ರೀತಿ ವಂಚನೆ ಮತ್ತು ಪ್ರೇಮ ವಿವಾಹಕ್ಕೆ ಬೆದರಿಕೆ ಒಡ್ಡಿರುವ ಎರಡು ಘಟನೆಗಳು ಬೆಳಕಿಗೆ ಬಂದಿವೆ. ಮದುವೆಯ ಭರವಸೆ ನೀಡಿ ಕೈಕೊಟ್ಟ ಪ್ರಿಯಕರನಿಂದ ಮೋಸ ಹೋದ ಯುವತಿ ನ್ಯಾಯಕ್ಕಾಗಿ ಅಲೆಯುತ್ತಿದ್ದರೆ, ಪ್ರೀತಿಸಿ ಮದುವೆಯಾದ ಜೋಡಿಗೆ ಕುಟುಂಬದಿಂದಲೇ ಜೀವ ಬೆದರಿಕೆ ಎದುರಾಗಿದೆ. ಪ್ರೀತಿಯ ಹೆಸರಿನಲ್ಲಿ ನಡೆಯುವ ಈ ಅನ್ಯಾಯಗಳು ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಕೊಪ್ಪಳ, ನ.5: ಪ್ರೀತಿ ಎನ್ನುವುದು ಜೀವನಕ್ಕೆ ಸುಂದರ ಭರವಸೆಯಾಗಬೇಕಿತ್ತು, ಆದರೆ ಅದೇ ಪ್ರೀತಿ ಕೆಲವರ ಬದುಕನ್ನು ಬೀದಿಗೆ ತಂದಿದೆ. ಪ್ರೀತಿಯ ಹೆಸರಿನಲ್ಲಿ ವಂಚನೆ ಹಾಗೂ ಪ್ರೇಮ ವಿವಾಹವಾದ ಕಾರಣಕ್ಕೆ ಕುಟುಂಬದವರಿಂದಲೇ ಬೆದರಿಕೆ ಎದುರಾಗಿರುವ ಎರಡು ಪ್ರತ್ಯೇಕ ಆಘಾತಕಾರಿ ಘಟನೆಗಳು ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗಿವೆ.