2026ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ನಲ್ಲಿ ಭಾರತ ಪುರುಷರ ಹಾಕಿ ತಂಡವು ಗೆದ್ದು ಬೀಗಿದೆ. ದಕ್ಷಿಣ ಕೊರಿಯಾ ಮಣಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ, ಜಪಾನ್ ತಂಡವನ್ನು ಬಗ್ಗುಬಡಿದಿದೆ. ಇದರೊಂದಿಗೆ ಆರನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು ಹಾಗೂ ಸತತ ಮೂರು ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ (ಹ್ಯಾಟ್ರಿಕ್) ಮಾಡಿತು. ಭಾರತದ ಪುರುಷರ ಹಾಕಿ ತಂಡ ಮತ್ತೊಮ್ಮೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡಿದೆ. ಇಂದು (ನವೆಂಬರ್ 05) ಮೊಹಾಲಿಯ ಒಲಿಂಪಿಯನ್ ಬಲ್ಬೀರ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ, ಜಪಾನ್ ವಿರುದ್ಧ 4-1 ಅಂತರದ ಗೆಲುವು ಸಾಧಿಸಿದೆ.