ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಾರ್ಟಿಗೆ ಭಾರಿ ಮುಖಭಂಗವಾಗಿದೆ. ಈ ಚುನಾವಣೆಯಲ್ಲಿ, ಭಾರತೀಯ-ಅಮೆರ. ಈ ಚುನಾವಣೆಯಲ್ಲಿ, ಭಾರತೀಯ-ಅಮೆರಿಕನ್ ಸಮುದಾಯದ ವೋಟಿಂಗ್ ಪ್ಯಾಟರ್ನ್ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಟ್ರಂಪ್ ಅವರ ಕಠಿಣ ವಲಸೆ ನೀತಿ, H-1B ವೀಸಾ ಮೇಲಿನ ನಿರ್ಬಂಧಗಳು ಮತ್ತು ಭಾರತದ ವಿರುದ್ಧದ ವ್ಯಾಪಾರ ನೀತಿಗಳು ಈ ಚುನಾವಣೆಯಲ್ಲಿ ರಿಪಬ್ಲಿಕನ್ನರಿಗೆ ತೀವ್ರ ಮುಳುವಾಗಿ ಪರಿಣಮಿಸಿವೆ. ಭಾರತೀಯ ಮೂಲದ ಮತದಾರರು ರಿಪಬ್ಲಿಕನ್ ಪಕ್ಷಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದು, ಡೆಮಾಕ್ರಟಿಕ್ ಅಭ್ಯರ್ಥಿಗಳಿಗೆ ಜೈ ಎಂದಿದ್ದಾರೆ..ಡೆಮಾಕ್ರಟ್ಗಳ ಕ್ಲೀನ್ ಸ್ವೀಪ್!ಯುಎಸ್ ಕಾಂಗ್ರೆಸ್ ಚುನಾವಣೆಯಲ್ಲಿ ಭಾರತೀಯ ಮೂಲದ ಡೆಮಾಕ್ರಟ್ಗಳು ಅದ್ಭುತ ಜಯಭೇರಿ ಬಾರಿಸಿದ್ದಾರೆ.