ಬೆಂಗಳೂರು: ಕನ್ನಡ ಬಿಗ್ಬಾಸ್ ಸೀಸನ್ 11 ರಲ್ಲಿ ಭಾಗವಹಿಸಿದ್ದ ಕಿರುತೆರೆ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯಾ ಸಿಂದೋಗಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಬಿಗ್ ಬಾಸ್ ಬಳಿಕ ಇಬ್ಬರು ಒಟ್ಟಾಗಿ ಸೋಷಿಯಲ್ ಮೀಡಿಯಾನಲ್ಲಿ ರೀಲ್ಸನ್ ಮಾಡಿಕೊಂಡಿದ್ದ ಈ ಜೋಡಿ, ಇಷ್ಟು ದಿನಗಳ ತಮ್ಮ ಸ್ನೇಹಕ್ಕೆ ಹೊಸ ರೂಪ ಕೊಡಲು ಮುಂದಾಗಿದ್ದು, ತಾವಿಬ್ಬರೂ ಮದುವೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. .“ಊಹೆಗಳ ಹಿಂದೆ ಒಂದು ಕಥೆಯಿತ್ತು…ನಗುವಿನ ಹಿಂದೆ ಒಂದು ಪ್ರೀತಿಯಿತ್ತು…ಕಮೆಂಟ್ಗಳ ಹಿಂದೆ ನಿಮ್ಮ ಕುತೂಹಲವಿತ್ತು…ಇಂದು ಆ ಕಥೆಗೆ ಒಂದು ಸುಂದರವಾದ ಹೆಸರಿದೆ — AISHIR! ಇಷ್ಟು ದಿನ ನಮ್ಮ ಕಥೆಯನ್ನು ನಿಮ್ಮದೇ ಕಥೆಯಂತೆ ಪ್ರೀತಿಸಿದ ಎಲ್ಲರಿಗೂ ಧನ್ಯವಾದಗಳು.