ಒಂದು ತಿಂಗಳ ನಿರಂತರ ಪ್ರತಿಭಟನೆ ಬಳಿಕ ಕಬ್ಬು ಬೆಳೆಗಾರರಿಗೆ ತಕ್ಕ ಮಟ್ಟಿಗೆ ಜಯ ಸಿಕ್ಕಿದೆ. ಪ್ರತಿ ಟನ್ ಕಬ್ಬಿಗೆ ರೂ. 3,600 ದರ ನಿಗದಿಪಡಿಸಲಾಗಿದೆ. ಸ್ವತಃ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ. ಆದರೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅಧಿಕೃತವಾಗಿ ಘೋಷಿಸುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ. ಬೆಳಗಾವಿ, ನವೆಂಬರ್ 05: ಒಂದು ತಿಂಗಳಿಂದ ನಿರಂತರ ಹೋರಾಟ, ರಾಷ್ಟ್ರೀಯ ಹೆದ್ದಾರಿ ಬಂದ್, ಪಾದಯಾತ್ರೆ, ಕರ್ನಾಟಕ ಬಂದ್, ಜೈಲ್ ಭರೋ ಚಳವಳಿ ಹೀಗೆ ನಾನಾ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಕಬ್ಬು ಬೆಳೆಗಾರರಿಗೆ ಕಡೆಗೂ ತಮ್ಮ ಬೇಡಿಕೆಗೆ ಸ್ಪಂದನೆ ತಕ್ಕ ಮಟ್ಟಿಗೆ ಸಿಕ್ಕಿದೆ.