ಮಹಿಳಾ ಕ್ರಿಕೆಟ್ ಲೋಕದ ಅತ್ಯಂತ ದೊಡ್ಡ ಟೂರ್ನಿ ವುಮೆನ್ಸ್ ಪ್ರೀಮಿಯರ್ ಲೀಗ್ನ 5ನೇ ಆವೃತ್ತಿಗೆ ವೇದಿಕೆ ಸಿದ್ಧವಾಗಿದೆ. ಭಾರತದಲ್ಲಿ ನಡೆಯಲಿರುವ ಈ ಟೂರ್ನಿಯು ಜನವರಿ 14 ರಿಂದ ಆರಂಭವಾಗಲಿದ್ದು, ಫೆಬ್ರವರಿ 7 ರಂದು ಹೈ-ವೋಲ್ಟೇಜ್ ಫೈನಲ್ ಪಂದ್ಯ ಜರುಗಲಿದೆ. ಆದರೆ, ಈ ಬಾರಿ ಟೂರ್ನಿಯ ಆಯೋಜನೆಯಲ್ಲಿ ಬಿಸಿಸಿಐ ಕೆಲವು ಮಹತ್ತರ ಬದಲಾವಣೆಗಳನ್ನು ಮಾಡಿದ್ದು, ಆ ಬದಲಾವಣೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.