ಅಪರಿಚಿತರೊಂದಿಗೆ ಸ್ನೇಹ ಬೆಳೆಸುವುದು, ಹಿಂದು-ಮುಂದು ಗೊತ್ತಿಲ್ಲದೆ ಮದ್ಯದ ಪಾರ್ಟಿಗೆ ತೆರಳುವುದು ಎಷ್ಟು ಅಪಾಯಕರ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಂತಿರುವ ಘಟನೆಯೊಂದು ಬೆಂಗಳೂರಿನ ಕೋರಮಂಗಲ ವ್ಯಾಪ್ತಿಯಲ್ಲಿ ನಡೆದಿದೆ. ರಾಜಸ್ಥಾನದ ಜೈಪುರದಿಂದ ಬಂದಿದ್ದ ಯುವತಿಗೆ ಪಬ್ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಆಕೆಯನ್ನು ಹೋಟೆಲ್ಗೆ ಆಹ್ವಾನಿಸಿ ಮದ್ಯದ ಪಾರ್ಟಿ ಮಾಡಿ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಇದೀಗ ಮಡಿವಾಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೆಂಗಳೂರು, ನವೆಂಬರ್ 5: ಅಪರಿಚಿತರೊಂದಿಗೆ ಸ್ನೇಹ ಬೆಳೆಸುವ ಮುನ್ನ ಎಚ್ಚರಿಕೆ ಅಗತ್ಯ ಎಂಬುದನ್ನು ನೆನಪಿಸುವಂತಹ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ. ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರು ಕೋರಮಂಗಲದ ಪಬ್ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದೇ ಆಕೆಗೆ ಮುಳುವಾಗಿದೆ.