ಸಾಲು ಸಾಲು ಹಿಟ್ ನೀಡುತ್ತಿರುವ ನಟಿ ಮಮಿತಾ ಬೈಜು ತಮ್ಮ ಪ್ರೇಮ ಜೀವನದ ಬಗ್ಗೆ ಮಾತನಾಡಿದ್ದಾರೆ. ತಮಗೆ ಸುಲಭವಾಗಿ ಯಾರ ಮೇಲೂ ಕ್ರಶ್ ಆಗುವುದಿಲ್ಲ ಎಂದು ಹೇಳಿದ್ದಾರೆ. 2026ರಲ್ಲಿ ಜಾಗತಿಕವಾಗಿ 919 ಕೋಟಿ ಗಳಿಸಿರುವ ಅವರು ಬಾಕ್ಸ್ ಆಫೀಸ್ ಕ್ವೀನ್ ಆಗಿ ಮೆರೆಯುತ್ತಿದ್ದು, ಉತ್ತಮ ಸಂಬಂಧದಲ್ಲಿ ಇರಲು ಬಯಸುವುದಾಗಿ ತಿಳಿಸಿದ್ದಾರೆ. 'ಪ್ರೇಮಲು' ಸಿನಿಮಾ ಖ್ಯಾತಿಯ ಮಮಿತಾ ಬೈಜು ಸದ್ಯ ದಕ್ಷಿಣ ಭಾರತದ ಅತಿ ಯಶಸ್ವಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಇವರು ಬಾಕ್ಸ್ ಆಫೀಸ್ನಲ್ಲಿ ಸಖತ್ ಸೌಂಡು ಮಾಡುತ್ತಿದ್ದಾರೆ.