ಸೋಮವಾರಪೇಟೆ: ಕೊಡಗಿನ ವೀರಶೈವ ಅರಸರು ಮೂಲ ನಿವಾಸಿಗಳ ಆಚಾರ-ವಿಚಾರಗಳನ್ನು ಗೌರವಿಸುವುದರೊಂದಿಗೆ ಕಲೆ, ಸಾಹಿತ್ಯ ಮತ್ತು ಧಾರ್ಮಿಕ ಪರಂಪರೆಯ ಬೆಳವಣಿಗೆಗೆ ವಿಶೇಷ ಪ್ರೋತ್ಸಾಹ ನೀಡಿದ್ದರು ಎಂದು ಕೊಡ. ಪ್ರಕೃತಿ ಆರಾಧನೆ ಮತ್ತು ಭಗವತಿ ದೇವಿಯ ಆರಾಧನೆಗೆ ಪ್ರೋತ್ಸಾಹ ನೀಡುವ ಮೂಲಕ ಸ್ಥಳೀಯ ಜನರೊಂದಿಗೆ ಬೆರೆತು ಆಡಳಿತ ನಡೆಸಿದ್ದರು. ವಂಶದ ಕೊನೆಯ ಅರಸರಾದ ಚಿಕ್ಕವೀರರಾಜೇಂದ್ರ ಅವರ ಕಾಲದವರೆಗೂ ಕಲೆ ಮತ್ತು ಸಾಹಿತ್ಯಕ್ಕೆ ಉತ್ತಮ ಪ್ರೋತ್ಸಾಹ ದೊರೆಯುತ್ತಿತ್ತು. ಇತಿಹಾಸ ಪ್ರಸಿದ್ಧ ರಾಜೇಂದ್ರನಾಮೆ ಗ್ರಂಥವು ಕೊಡಗಿನ ಇತಿಹಾಸ ತಿಳಿಸುವ ಮಹತ್ವದ ದಾಖಲೆಯಾಗಿದೆ ಎಂದರು.ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಿ.ಇ.ಅನಸೂಯ, ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಕವಿಗಳು, ಸಾಹಿತಿಗಳು ಹಾಗೂ ಕಲಾವಿದರ ಕೊಡುಗೆ ಕುರಿತು ಉಪನ್ಯಾಸ ನೀಡಿದರು.