ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವವರು ನಟಿ ಕಂಗನಾ ರಣಾವತ್. ಪ್ರಸ್ತುತ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆಯಾಗಿರುವ ಅವರು ರಾಜಕಾರಣದ ಜತೆಗೆ ಬಾಲಿವುಡ್ನಲ್ಲೂ. ಸಂಸದೆಯಾದ ಬಳಿಕ ‘ಎಮರ್ಜೆನ್ಸಿ’, ‘ಭಾರತ್ ಭಾಗ್ಯ ವಿಧಾತ’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಕಂಗನಾ ಸದ್ಯ ‘ಕ್ವೀನ್ 2’ ಮತ್ತು ‘ಸರ್ಕಲ್’ ಸಿನಿಮಾಗಳ ಶೂಟಿಂಗ್ ಪೂರ್ಣಗೊಳಿಸಿ, ರಿಲೀಸ್ಗೆ ಎದುರು ನೋಡುತ್ತಿದ್ದಾರೆ. ಆ ಮಧ್ಯೆಯೇ ಅವರು ಮತ್ತೊಂದು ಹೊಸ ಸಿನಿಮಾ ಘೋಷಿಸಿದ್ದಾರೆ. ಹಲವು ವರ್ಷಗಳ ಬಳಿಕ ಕಂಗನಾ ಹಾರರ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇತ್ತೀಚೆಗೆ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಹಾರರ್ ಕಾನ್ ಇಂಡಿಯಾ -2026ರಲ್ಲಿ ನಟ, ನಿರ್ಮಾಪಕ ರಾಣಾ ದಗ್ಗುಬಾಟಿ ಈ ಸಿನಿಮಾ ಘೋಷಿಸಿದ್ದು, ‘ಸ್ಕೇರಿ ಪಿಕ್ಚರ್’ ಎಂದು ಹೆಸರಿಡಲಾಗಿದೆ.