ವಿಜಯವಾಣಿ ಸುದ್ದಿಜಾಲ ಹೆಬ್ರಿಕರ್ನಾಟಕದ ಜೀವವೈವಿಧ್ಯಕ್ಕೆ ರಾಜ್ಯೋತ್ಸವ ಸಂಭ್ರಮದಲ್ಲಿ ವಿಶೇಷ ಗೌರವ ಸಿಕ್ಕಿದೆ. ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡುಬರುವ ಅಪರೂಪದ ‘ಮಲೆನಾಡಿನ ಮರಗಂತಿ ಕಪ್ಪೆ’ಯನ್ನ. ಈ ಮೂಲಕ ರಾಜ್ಯ ಉಭಯಜೀವಿಯನ್ನು ಗುರುತಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಶ್ಚಿಮ ಟ್ಟದ ವಿಶಿಷ್ಟ ಜೀವವೈವಿಧ್ಯದ ಪ್ರತಿನಿಧಿಯಾಗಿರುವ ಈ ಅಪರೂಪದ ಉಭಯಜೀವಿ ಮರಗಳು, ಪೊದೆಗಳು ಹಾಗೂ ಸಸ್ಯವರ್ಗದ ನಡುವೆ ವಾಸಿಸುತ್ತದೆ. ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.ಮರಗಳ ಮೇಲೆ ವಾಸಮರಗಂತಿ ಕಪ್ಪೆ ನೆಲಕ್ಕಿಂತ ಹೆಚ್ಚಾಗಿ ಎಲೆಗಳು, ಕೊಂಬೆ, ಪೊದೆ ಹಾಗೂ ಬಳ್ಳಿಗಳ ಮೇಲೆ ವಾಸಿಸಲು ಇಷ್ಟಪಡುತ್ತದೆ. ಮರ, ಎಲೆಗಳ ಮೇಲೆ ಹಿಡಿತ ಸಾಧಿಸಲು ಕಾಲ್ಬೆರಳುಗಳ ತುದಿಯಲ್ಲಿ ವಿಶೇಷ ಅಂಟಿಕೊಳ್ಳುವ ಪ್ಯಾಡ್ಗಳಿರುತ್ತವೆ.