ಕಳಸ: ಕಸ್ತೂರಿ ರಂಗನ್ ವರದಿ ಪಶ್ಚಿಮಘಟ್ಟದಲ್ಲಿ ಮೂಡಿಸಿರುವ ಗೊಂದಲ ಮತ್ತು ಆತಂಕಕ್ಕೆ ಆಯಾ ಭಾಗದ ಸಂಸದರೇ ಹೊಣೆ ಎಂದು ಜನಜಾಗೃತಿ ಸಂಗ್ರಾಮ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಜಗನ್ ಹೇಳಿದರು. ಕಸ್ತೂರ. ಕಸ್ತೂರಿ ರಂಗನ್ ವರದಿ ಬಗ್ಗೆ ಜನಜಾಗೃತಿ ಸಂಗ್ರಾಮ ವೇದಿಕೆ ರಾಜ್ಯಮಟ್ಟದಲ್ಲಿ ನಡೆಸುವ ಹೋರಾಟದ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಕಸ್ತೂರಿ ರಂಗನ್ ವರದಿ ಬಗ್ಗೆ 11 ಬಾರಿ ಸಭೆ ನಡೆದರೂ ಇಲ್ಲಿನ ಸಂಸದರು ವಿರೋಧ ವ್ಯಕ್ತಪಡಿಸಿಲ್ಲ. ಪಶ್ಚಿಮಘಟ್ಟದ ಜನರ ಮತ್ತು ಅವರ ಜೀವನದ ಬಗ್ಗೆ ಸಂಸದರು ಗಮನಹರಿಸದೆ ಇರುವುದು ವಿಷಾದನೀಯ ಎಂದು ಹೇಳಿದರು.