ಟೈಗರ್ ಶ್ರಾಫ್ ಅವರ ಮೇಲೆ ದಾಳಿ ಮಾಡಿದ್ದು, ಅವರಿಗೆ ಗಾಯಗಳಾಗಿದ್ದವು. ಅದರ ಬೆನ್ನಲ್ಲೆ ಇತರೆ ಕೆಲವು ಬಾಲಿವುಡ್ ನಟರಿಗೆ ಬೆದರಿಕೆ ಕರೆಗಳು ಬರಲು ಆರಂಭವಾಗಿವೆ. ಇತ್ತೀಚೆಗಷ್ಟೆ ನಟ, ನಿರ್ಮಾಪಕ ತುಷಾರ್ ಕಪೂರ್ ಅವರಿಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗಿನ ಸದಸ್ಯನೆಂದು ಹೇಳಿಕೊಂಡು ಕರೆ ಮಾಡಿ 5 ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಇಂದು ನಟ ಆಯುಷ್ಮಾನ್ ಖುರಾನಾ ಅವರಿಗೂ ಸಹ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.