WPL 2027ರ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದೆ. ಜನವರಿ 14ರಿಂದ ವಡೋದರಾದಲ್ಲಿ ಮೊದಲ ಹಂತದ ಪಂದ್ಯಗಳು ನಡೆಯಲಿದ್ದು, ನಂತರ ಮುಂಬೈಗೆ ಸ್ಥಳಾಂತರಗೊಳ್ಳಲಿವೆ. ಒಟ್ಟು 22 ಪಂದ್ಯಗಳು, ಪ್ಲೇಆಫ್ ಮತ್ತು ಫೈನಲ್ ಒಳಗೊಂಡಿದ್ದು, ಫೆಬ್ರವರಿ 7ರಂದು ಫೈನಲ್ ನಡೆಯಲಿದೆ. ಎಲ್ಲಾ ಪಂದ್ಯಗಳು ರಾತ್ರಿ 7:30ಕ್ಕೆ ಆರಂಭವಾಗಲಿವೆ. ಕೆಲವೇ ದಿನಗಳ ಹಿಂದೆ ಬಿಸಿಸಿಐ, 2027ರ ಮಹಿಳಾ ಪ್ರೀಮಿಯರ್ ಲೀಗ್ಗಾಗಿ ಮಿನಿ ಹರಾಜು ನಡೆಸಿತ್ತು. ಇದೀಗ ಈ ಐದನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಮುಂದಿನ ಸೀಸನ್ 2027ರ ಜನವರಿ 14ರಿಂದ ಫೆಬ್ರವರಿ 7ರವರೆಗೆ ನಡೆಯಲಿದ್ದು, ಈ ಬಾರಿ ವಡೋದರಾ ಮತ್ತು ಮುಂಬೈ ನಗರಗಳು ಈ ಲೀಗ್ಗೆ ಆತಿಥ್ಯ ವಹಿಸಲಿವೆ.