ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ನಿಷ್ಕಲ್ಮಶ ಸಂಬಂಧವನ್ನು ವಿವರಿಸಲು ಅಸಾಧ್ಯ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಇಲ್ಲೊಬ್ಬ ವ್ಯಕ್ತಿ ನಾಯಿಮರಿಗೆ ತನ್ನ ಟಿಫನ್ ಬಾಕ್ಸ್ ನಲ್ಲಿದ್ದ ಆಹಾರ ಹಾಕಿ ಅದರ ಹಸಿವು ನೀಗಿಸುವ ಕೆಲಸ ಮಾಡಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಮೂಕ ಪ್ರಾಣಿಗಳ ಹಸಿವು ನೀಗಿಸುವ, ದಾಹ ತೀರಿಸುವ ಮನುಷ್ಯನ ಒಳ್ಳೆತನಕ್ಕೆ ಯಾರಾದ್ರೂ ಫಿದಾ ಆಗುತ್ತೇವೆ. ಇದೀಗ ಒಳ್ಳೆಯ ಮನಸ್ಸಿನ ವ್ಯಕ್ತಿಯ ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದಾನೆ. ಹಸಿವಿನಿಂದ ಬಳಲಿದ್ದ ನಾಯಿಮರಿಗೆ (Puppy) ಊಟ ಹಾಕಿ ಅದರ ಹಸಿವು ನೀಗಿಸಿ ಹೃದಯ ಶ್ರೀಮಂತಿಕೆ ಮೆರೆದಿದ್ದಾನೆ.