ಬೆಂಗ್ಳೂರು ಮೂಲದ 'ಸ್ಟಾಕಲ್' ಎನ್ನುವ ಫಿನ್ಟೆಕ್ ಪ್ಲಾಟ್ಫಾರ್ಮ್ನಲ್ಲಿ ಸುಮಾರು 30 ಭಾರತೀಯ ಹೂಡಿಕೆದಾರರು ವಂಚನೆಗೆ ಒಳಗಾಗಿರುವ ಘಟನೆ ಬೆಳಕಿಗೆ ಬಂದಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅವಕಾಶ ಇರುವ ಈ ಪ್ಲಾಟ್ಫಾರ್ಮ್ನಲ್ಲಿ ಹೂಡಿಕೆದಾರರಿಗೆ ನೂರಾರು ಕೋಟಿ ರೂ ನಷ್ಟವಾಗಿರುವ ಆರೋಪ ಇದೆ. ಹೂಡಿಕೆದಾರರಿಗೆ ಸೇರಿದ ನಿರ್ದಿಷ್ಟ ಕಂಪನಿಗಳ ಷೇರುಗಳನ್ನು ಅವರಿಗೆ ಅರಿವಿಲ್ಲದಂತೆ ಮಾರಿ ಬೇರೆ ಷೇರುಗಳನ್ನು ಖರೀದಿಸಲಾಗಿದೆ. ಆ ಷೇರು ಕುಸಿತ ಪರಿಣಾಮ ಹೂಡಿಕೆದಾರರಿಗೆ ನಷ್ಟ ಏರ್ಪಟ್ಟಿದೆ.