ಐಟಿ-ಬಿಟಿ ಸಂಸ್ಥೆಗಳಲ್ಲಿ ಕನ್ನಡಿಗರ ಉದ್ಯೋಗದ ಕುರಿತಾದ ಕರವೇ ಅಭಿಯಾನಕ್ಕೆ ಬೆಂಬಲ ಸೂಚಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕನ್ನಡಿಗರನ್ನು ವ್ಯಂಗ್ಯ ಮಾಡಿದ ತಮಿಳುನಾಡು ಕೇಡರ್ ಐಪಿಎಸ್ ಅಧಿಕಾರಿ ಧನುಷ್ ಕುಮಾರ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ ತಮ್ಮ ಹೇಳಿಕೆಗೆ ಧನುಷ್ ಕುಮಾರ್ ಸ್ಪಷ್ಟನೆ ನೀಡಿದ್ದು, ನನ್ನ ಜನ್ಮಭೂಮಿ ಕರ್ನಾಟಕ. ಕರ್ಮಭೂಮಿ ತಮಿಳುನಾಡು. ಆದರೆ ನನ್ನ ಉಸಿರಿನಲ್ಲಿ ಎಂದೆಂದಿಗೂ ಕನ್ನಡವೇ ಇದೆ ಎಂದಿದ್ದಾರೆ. ಬೆಂಗಳೂರು, ನವೆಂಬರ್ 04: ಐಟಿ-ಬಿಟಿ ಕಂಪನಿಗಳಿಗೆ ತೆರಳಿ ಕನ್ನಡಿಗ ಉದ್ಯೋಗಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಕರವೇ ಅಭಿಯಾನಕ್ಕೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.