ದಿವಂಗತ ತಂದೆಯವರ ಮೊದಲ ವರ್ಷದ ಪಿತೃಕಾರ್ಯವಿದ್ದು, ಅದರಲ್ಲಿ ಭಾಗವಹಿಸಲು 20 ದಿನಗಳ ಮಧ್ಯಂತರ ಜಾಮೀನಿಗಾಗಿ ಮನವಿ ಮಾಡಿದ್ದರು. ಸೆಷನ್ಸ್ ನ್ಯಾಯಾಲಯದಲ್ಲಿ ಈಗಾಗಲೇ ಪ್ರದೋಶ್ ಅವರ ಜಾಮೀನು ಅರ್ಜಿ ರದ್ದಾಗಿದೆ. ಅದರ ಬಳಿಕ ಪ್ರದೋಶ್, ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ನಲ್ಲಿ ಇಂದು (ನವೆಂಬರ್ 04) ಸಾಕಷ್ಟು ವಿಚಾರಣೆ ನಡೆದಿದ್ದು, ಅಂತಿಮವಾಗಿ ಪ್ರದೋಶ್ಗೆ ಜಾಮೀನು ನೀಡಿಲ್ಲವಾದರೂ ಪಿತೃ ಕಾರ್ಯದಲ್ಲಿ ಭಾಗವಹಿಸಲು ನಿಯಮಿತ ದಿನಗಳ ವರೆಗೆ ಅನುಮತಿ ನೀಡಲಾಗಿದೆ.