ನವದೆಹಲಿ: ಐಪಿಎಲ್ನಲ್ಲಿ ಅಚ್ಚರಿಯ ವರ್ಗಾವಣೆಯೊಂದರ ಸಾಧ್ಯತೆ ಎದುರಾಗಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದಿಂದ ಪಂಜಾಬ್ ಕಿಂಗ್ಸ್ಗೆ ಮತ್ತು ಎಡಗೈ ವೇಗಿ ಅರ್ಷದೀಪ್. ಹಾರ್ದಿಕ್ರನ್ನು ವರ್ಗಾವಣೆ ಮಾಡಿಸಿಕೊಳ್ಳಲು ಈ ಹಿಂದೆ ಕೆಲ ತಂಡಗಳು ಪ್ರಯತ್ನಿಸಿದ್ದವು. ಇದೀಗ ಪಂಜಾಬ್ ತಂಡ ಇದರ ಸನಿಹದಲ್ಲಿದೆ ಎನ್ನಲಾಗಿದೆ. ಕೆಕೆಆರ್, ಸಿಎಸ್ಕೆ, ರಾಜಸ್ಥಾನ ರಾಯಲ್ಸ್ ತಂಡಗಳ ಜತೆಗೂ ಹಾರ್ದಿಕ್ ಹೆಸರು ಕೇಳಿಬಂದಿತ್ತು. ಆದರೆ ಇದೀಗ ಪಂಜಾಬ್ ಕಿಂಗ್ಸ್ ಅಚ್ಚರಿಯ ರೀತಿಯಲ್ಲಿ ಹಾರ್ದಿಕ್ರನ್ನು ಸೆಳೆದುಕೊಳ್ಳುವ ಸಾಧ್ಯತೆ ಕಾಣಿಸಿದೆ. ಇದಕ್ಕಾಗಿ ಅರ್ಷದೀಪ್ ಜತೆಗೆ ವಿಕೆಟ್ ಕೀಪರ್-ಬ್ಯಾಟರ್ ವಿಷ್ಣು ವಿನೋದ್ರನ್ನೂ ಮುಂಬೈಗೆ ವರ್ಗಾಯಿಸಲಿದೆ ಎನ್ನಲಾಗಿದೆ.