ಎಸ್ಐಆರ್ ಪ್ರಕ್ರಿಯೆಯ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವ ಹಳೆಯ ಮತದಾರರು ಕೂಡ ತಮ್ಮ ಹೆಸರನ್ನು ಅಂತಿಮ ಪಟ್ಟಿಗೆ ಮರುಸೇರ್ಪಡೆಗೊಳಿಸಲು ಯಾವುದೇ ಆತಂಕವಿಲ್ಲದೇ 'ಫಾರ್ಮ್-6' ಸಲ್ಲಿಸಬಹುದು ಎಂದು ಭಾರತೀಯ ಚುನಾವಣಾ ಆಯೋಗ ಮಹತ್ವದ ಸ್ಪಷ್ಟನೆ ನೀಡಿದೆ. ಈ ಹಿಂದೆ ಮತದಾರರಾಗಿದ್ದವರು ಮತ್ತೆ ಫಾರ್ಮ್-6 ಸಲ್ಲಿಸುವುದನ್ನು 'ಸುಳ್ಳು ಮಾಹಿತಿ ಅಥವಾ ಪ್ರಮಾಣಪತ್ರ ನೀಡಿಕೆ' ಎಂದು ಪರಿಗಣಿಸಲಾಗುವುದಿಲ್ಲ ಹಾಗೂ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗುವುದಿಲ್ಲ ಎಂದು ಚುನಾವಣಾ ಆಯೋಗ ಭರವಸೆ ನೀಡಿದೆ.