ಗಮನಾರ್ಹ ಪಾತ್ರ ಮತ್ತು ಅಭಿನಯದ ಮೂಲಕ ನಟಿ ರಿತಿಕಾ ನಾಯಕ್ ತೆಲುಗು ಚಿತ್ರರಂಗದಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಿದ್ದಾರೆ. 2022ರಲ್ಲಿ ತೆರೆಕಂಡಿದ್ದ ‘ಅಶೋಕ ವನಂಲೋ ಅರ್ಜುನ ಕಲ್ಯಾಣ್’ ಚಿತ್ರ. ಇನ್ನು ಕಳೆದ ಆಗಸ್ಟ್ನಲ್ಲಿ ಬಿಡುಗಡೆಯಾಗಿದ್ದ ‘ಕೊರಿಯನ್ ಕನಕರಾಜು’ ಚಿತ್ರದ ರಿತಿಕಾ ಪಾತ್ರ ಹಾಗೂ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆ ಬೆನ್ನಲ್ಲೇ ಅವರು ಟಾಲಿವುಡ್ನಲ್ಲಿ ಅವಕಾಶಗಳು ಹೆಚ್ಚಿಸಿಕೊಂಡಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ತೆಲುಗಿನ ‘ಪವರ್ ಪೇಟಾ’ ಚಿತ್ರದ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ರಿತಿಕಾ ನಾಯಕ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ನಟಿ ಪಾತ್ರದ ಸ್ಟ್ ಲುಕ್ ಟೀಸರ್ ರಿಲೀಸ್ ಮಾಡಲಾಗಿದೆ. ‘ಪವರ್ ಪೇಟಾ’ ಚಿತ್ರದಲ್ಲಿ ರಿತಿಕಾ, ‘ಪಡಮಠವಿಧೀ ಜಾನಕಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.