ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ದಿನವೇ ಹಾಲು ಮತ್ತು ಮೊಸರಿನ ದರ ಏರಿಸುವ ಮೂಲಕ ರಾಜ್ಯದ ಜನರಿಗೆ ಶಾಕ್ ನೀಡಿದ್ದ ರಾಜ್ಯ ಸರ್ಕಾರ ಈಗ, ಬಸ್ ಟಿಕೆಟ್ ದರವನ್ನು ಏರಿಕೆ ಮಾಡುವ ಮೂಲಕ ಇನ್ನೊಂದು. ಮಾಹಿತಿ ಪ್ರಕಾರ, ನವೆಂಬರ್ 5 ರಿಂದ ಬಸ್ ಟಿಕೆಟ್ ದರ ಏರಿಕೆ ಕಾಣಲಿದೆ ಎಂದು ಹೇಳಲಾಗುತ್ತಿದ್ದು, ಸಾರಿಗೆ ಇಲಾಖೆ ಸುಮಾರು 2,000 ಕೋಟಿ ನಷ್ಟದಲ್ಲಿದೆ, ಹೀಗಾಗಿ ಟಿಕೆಟ್ ಬೆಲೆ ಏರಿಕೆ ಅನಿವಾರ್ಯವೆಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ. 5 ಕ್ಕೆ ಏರಿಕೆ ಫಿಕ್ಸ್!ಇನ್ನು ಮಹಿಳೆಯರಿಗೆ ಬಸ್ ಟಿಕೆಟ್ ಅನ್ನು ಉಚಿತ ಮಾಡಿರುವ ಸರ್ಕಾರ ಗಂಡಸರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ ಎಂದು ಜನಾಕ್ರೋಶ ವ್ಯಕ್ತವಾಗುತ್ತಿದೆ.