ಬೆಂಗಳೂರು: ‘ಜಟ್ಟ’, ‘ಮೈತ್ರಿ’ ಖ್ಯಾತಿಯ ಬಿ.ಎಂ.ಗಿರಿರಾಜ್ ಡಬಲ್ ಸಂಭ್ರಮದಲ್ಲಿದ್ದಾರೆ. ಅವರು ಆ್ಯಕ್ಷನ್-ಕಟ್ ಹೇಳಿರುವ ಎರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ಗೆ ಸಿದ್ಧವಾಗಿವೆ. ‘ರಾಮರ. 11ಕ್ಕೆ ತೆರೆಗೆ ಬರಲಿದ್ದು, ಅದರ ಬೆನ್ನಲ್ಲೇ ಮತ್ತೊಂದು ಸಿನಿಮಾ ‘ಕಲ್ಯಾಣಿ’ ಕೂಡ ರಿಲೀಸ್ಗೆ ರೆಡಿಯಾಗಿದೆ. ಲೇಖಕ ಬಸವ ರೆಡ್ಡಿ ಕಥೆಗೆ ಗಿರಿರಾಜ್ ‘ಕಲ್ಯಾಣಿ’ ಹೆಸರಿನಲ್ಲಿ ಸಿನಿಮಾ ರೂಪ ನೀಡಿದ್ದಾರೆ. ಈಗಾಗಲೇ ಸದ್ದಿಲ್ಲದೇ ಚಿತ್ರೀಕರಣ ಪೂರ್ಣಗೊಳಿಸಿರುವ ಗಿರಿರಾಜ್ ಮತ್ತು ತಂಡ ಸದ್ಯ ಪೋಸ್ಟ್-ಪ್ರೊಡಕ್ಷನ್ನಲ್ಲಿದ್ದು, ಶೀಘ್ರವೇ ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡ ಆಡಿಯೋ ಬಿಡುಗಡೆ ಮಾಡಿತು. ಬಳಿಕ ಗಿರಿರಾಜ್, ‘‘ಕಲ್ಯಾಣಿ’ ನವಿರಾದ ಒಲವಿನ ಕಥೆ.