ಬೆಂಗಳೂರು : ಬಳ್ಳಾರಿ ರಸ್ತೆ (ಎನ್ಎಚ್ 44) ವ್ಯಾಪ್ತಿಯ ಬ್ಯಾಟರಾಯನಪುರ ಮತ್ತು ಕೊಡಿಗೇಹಳ್ಳಿ ಜಂಕ್ಷನ್ಗಳಲ್ಲಿ ರಸ್ತೆ ಅಪಘಾತ ತಡೆಗಟ್ಟುವ ಉದ್ದೇಶದಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕ. ಸಾವಿಗೀಡಾದವರಲ್ಲಿ ಪಾದಚಾರಿಗಳೇ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಪಾದಚಾರಿಗಳ ಸುರಕ್ಷತೆಗೆ ಕಾಮಗಾರಿ ಕೈಗೊಳ್ಳಲಾಗಿದೆ. ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್ಸಿಎಲ್) ಜಂಟಿ ಸಹಯೋಗದೊಂದಿಗೆ ಕಾಮಗಾರಿ ನಡೆಸಲಾಗಿದೆ. ಡಬ್ಲ್ಯುಆರ್ಐ ಇಂಡಿಯಾ ಸಂಸ್ಥೆಯು ಬ್ಲೂಮ್ಬರ್ಗ್ ಫಿಲಾಂತ್ರಪೀಸ್ ಇನಿಶಿಯೇಟಿವ್ ಫಾರ್ ಗ್ಲೋಬಲ್ ರೋಡ್ ಸೇಫ್ಟಿ (ಬಿಐಜಿಆರ್ಎಸ್) ಮತ್ತು ಕಂಪಾರ್ಟ್ಮೆಂಟ್ ಎಸ್4 ಯೋಜನೆಯಡಿ ತಾಂತ್ರಿಕ ನೆರವು ನೀಡಿದೆ.