ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಇನ್ನೊಂದೆಡೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ತಮ್ಮ ಆಪ್ತರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಹೌದು...ಹಾಸನಾಂಬೆ ದರ್ಶನಕ್ಕೆ ಸಚಿವ ಶಿವಲಿಂಗೇಗೌಡ್ರು ತಮ್ಮ ಆಪ್ತರಿಗಾಗಿ 5 ಲಕ್ಷ ರೂಪಾಯಿ ನೀಡಿ 500 ಟಿಕೆಟ್ ಖರೀದಿಸಿದ್ದಾರೆ. ಹಾಸನ, (ನವೆಂಬರ್ 03): ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಖುದ್ದು ತಾವೇ ಕೌಂಟರ್ಗೆ ತೆರಳಿ 1 ಸಾವಿರ ರೂ. ಮೌಲ್ಯದ 500 ಟಿಕೆಟ್ ಖರೀದಿಸಿದ್ದು, ಬಳಿಕ ಟಿಕೆಟ್ ಗಳನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಅವರಿಗೆ ಹಸ್ತಾಂತರಿಸಿದರು.