ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಹೋರಾಟ ಒಂದು ವರ್ಷ ಪೂರೈಸಿದೆ. ಇತ್ತೀಚೆಗೆ ಹೋರಾಟಗಾರರು ಗವಿಮಠದ ಶ್ರೀಗಳ ಬೆಂಬಲ ಕೋರಿ, ವಿವಾದಾತ್ಮಕ ಹೇಳಿಕೆ ನೀಡಿದ ಪರಿಣಾಮ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀಗಳ ವಿರುದ್ಧ ಹೋರಾಟ ಮಾಡುವ ಎಚ್ಚರಿಕೆ ಭಕ್ತರನ್ನು ಕೆರಳಿಸಿದೆ. ಹೋರಾಟದ ನಿಜ ಉದ್ದೇಶದಿಂದ ಗಮನ ಬೇರೆಡೆಗೆ ಹರಿಯುತ್ತಿದ್ದು, ಜಂಟಿ ಕ್ರಿಯಾ ಸಮಿತಿ ವಿಷಾದ ವ್ಯಕ್ತಪಡಿಸಿದೆ. ಕೊಪ್ಪಳ, ನವೆಂಬರ್ 03: ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಆರಂಭವಾಗಿರುವ ಧರಣಿಗೆ ಇದೀಗ ಒಂದು ವರ್ಷ. ಆದರೆ ಬಲ್ಡೋಟಾ ಕಾರ್ಖಾನೆಯ ವಿಸ್ತರಣೆಯನ್ನ ವಿರೋಧಿಸುವ ಬರದಲ್ಲಿ, ಹೋರಾಟ ಹಾದಿ ತಪ್ಪುತ್ತಿದೆ.