ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ವೈಯಕ್ತಿಕ ಸಮಸ್ಯೆಗಳು ಮತ್ತು ಮಾನಸಿಕ ಚಿಂತೆಗಳು ನಮ್ಮ ಜೀವನದ ಒಂದು ಭಾಗವಾಗಿಬಿಟ್ಟಿವೆ. ಈ ಎಲ್ಲದರ ಕಾರಣದಿಂದ ಅತಿಯಾದ ಚಿಂತೆ ನಮ್ಮನ್ನು ಆವರಿಸುತ್ತಿದೆ. ಈ ಚಿಂತೆಗಳು ನೆಮ್ಮದಿಯನ್ನು ಹಾಳು ಮಾಡುವುದಲ್ಲದೆ ಮುಂದೊಂದು ದಿನ ಆರೋಗ್ಯ ಸಮಸ್ಯೆಗಳನ್ನು ಸಹ ಉಂಟು ಮಾಡುತ್ತವೆ. ಆದ್ದರಿಂದ ಒತ್ತಡ, ಚಿಂತೆಯಿಂದ ಮುಕ್ತರಾಗುವುದು ಬಹಳ ಮುಖ್ಯ. ಅದಕ್ಕಾಗಿ ಆಚಾರ್ಯ ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ. ಇಂದಿನ ಈ ಒತ್ತಡದ ಬದುಕಿನಲ್ಲಿ ಒತ್ತಡವು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಭಾಗವಾಗಿಬಿಟ್ಟಿದೆ. ಕೆಲಸದ ಒತ್ತಡ (stress), ಕುಟುಂಬದ ಜವಾಬ್ದಾರಿಗಳು, ಕೌಟುಂಬಿಕ ಸಮಸ್ಯೆಗಳು, ಭವಿಷ್ಯ ಹಾಗೂ ಹಣಕಾಸಿನ ಚಿಂತೆಗಳು… ಇಂತಹ ಅನೇಕ ಚಿಂತೆಗಳು ಮನಸ್ಸನ್ನು ದುರ್ಬಲಗೊಳಿಸುತ್ತವೆ.