Cyclone Murasu: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮುರಾಸು ಚಂಡಮಾರುತ ಆಂಧ್ರಪ್ರದೇಶದ ಕರಾವಳಿಗೆ ಇನ್ನೇನು ಕೆಲವೇ ಸಮಯಗಳಲ್ಲಿ ಅಪ್ಪಳಿಸಲಿಸಿದ್ದು, ಗಂಟೆಗೆ 120 ಕಿ.ಮೀ ವೇಗದಲ್ಲಿ ಬಿರುಗಾಳ. ದಕ್ಷಿಣ ಆಂಧ್ರ, ತಮಿಳುನಾಡು, ಪುದುಚೇರಿ ಸೇರಿದಂತೆ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಗಾಳಿಗೆ ಮರಗಳು ಧರೆಗೆ ಉರುಳಿವೆ. ಕರಾವಳಿಯತ್ತ ಮುಖಮಾಡಿರುವ ಮುರಾಸು ಚಂಡಮಾರುತದ ಪ್ರಭಾವದಿಂದಾಗಿ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಪುದುಚೇರಿ ಬಿರುಸಿನ ಮಳೆ ಸುರಿಯುತ್ತಿದ್ದು, ಜಿಲ್ಲಾಡಳಿತಗಳು ಹೈಅಲರ್ಟ್ ಆಗಿವೆ. ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಮಾಹಿತಿ ಪ್ರಕಾರ, ನವೆಂಬರ್ 3ರ ಮುಂಜಾನೆ 1:00 ಗಂಟೆಗೆ ಚಂಡಮಾರುತದ ಪ್ರವೇಶ ಆಗಿದೆ. 1:30ರ ವೇಳೆಗೆ ಮುರಾಸು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿದ್ದು, ಒಂಗೋಲ್ನಿಂದ ಆಗ್ನೇಯಕ್ಕೆ 40 ಕಿ.