ಬಿಗ್ ಬಾಸ್ ಮನೆಯ ನಾಮಿನೇಷನ್ ಪ್ರಕ್ರಿಯೆಯಲ್ಲಿ ಧನುಷ್ ಹಾಗೂ ಸೌಂದರ್ಯಾ ಶೆಟ್ಟಿ ನಡುವೆ ತೀವ್ರ ಜಟಾಪಟಿ ನಡೆದಿದೆ. ಸೌಂದರ್ಯಾ ಆಟ ಆಡುತ್ತಿಲ್ಲ ಎಂದು ಧನುಷ್ ನಾಮಿನೇಟ್ ಮಾಡಿದ್ದಕ್ಕೆ ಸಿಟ್ಟಿಗೆದ್ದ ಸೌಂದರ್ಯಾ, ನೀನು ನನ್ನ ಪಾಲಿಗೆ ಸತ್ತು ಹೋಗಿದ್ದೀಯಾ ಎಂದು ನೇರವಾಗಿ ಆಕ್ರೋಶ ವ್ಯಕ್ತಪಡಿಸಿ ತಿರುಗೇಟು ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಶುರುವಾಯಿತೆಂದರೆ ಸಾಕು, ಸ್ಪರ್ಧಿಗಳ ನಡುವಿನ ಕಿತ್ತಾಟ ಹಾಗೂ ವೈಯಕ್ತಿಕ ವೈಮನಸ್ಸುಗಳು ಹೊರಬರಲು ತೊಡಗುತ್ತವೆ. ಈ ವಾರದ ನಾಮಿನೇಷನ್ ಜಟಾಪಟಿ ಕೂಡ ಅದಕ್ಕೆ ಹೊರತಾಗಿರಲಿಲ್ಲ. ಪ್ರತಿಯೊಬ್ಬ ಸ್ಪರ್ಧಿಗೂ ಇಬ್ಬರನ್ನು ನಾಮಿನೇಟ್ ಮಾಡುವ ವಿಶೇಷ ಅಧಿಕಾರವನ್ನು ಬಿಗ್ ಬಾಸ್ ನೀಡಿದ್ದರು. ಈ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಮನೆಯಲ್ಲಿ ಗಂಭೀರ ವಾತಾವರಣ ನಿರ್ಮಾಣವಾಯಿತು.