ಬಿಗ್ ಬಾಸ್ ಕನ್ನಡ ಮನೆಯಲ್ಲಿ ಕಿಚ್ಚ ಸುದೀಪ್ ಪರೋಕ್ಷವಾಗಿ ಸುಳಿವು ನೀಡಿದ್ದರೂ ಸ್ಪರ್ಧಿಗಳು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಗ್ರೋಸರಿ ರ್ಯಾಂಕಿಂಗ್ ಟಾಸ್ಕ್ನಲ್ಲಿ ಕ್ಯಾಪ್ಟನ್ ಜಗದೀಶ್ ನಿರ್ಧಾರವನ್ನು ಗಂಭೀರವಾಗಿ ಪ್ರಶ್ನಿಸದೆ ಸ್ಪರ್ಧಿಗಳು ಮತ್ತೆ ಮೌನ ವಹಿಸಿದ್ದು, ವಾರಾಂತ್ಯದ ಪಂಚಾಯಿತಿಯಲ್ಲಿ ಸುದೀಪ್ ಅವರಿಂದ ಕ್ಲಾಸ್ ಎದುರಿಸುವ ಸಾಧ್ಯತೆಯಿದೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ಕಿಚ್ಚ ಸುದೀಪ್ ಅವರು ಬಂದು ಸ್ಪರ್ಧಿಗಳ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತಾರೆ. ಆಟದಲ್ಲಿ ಎಲ್ಲಿ ಎಡವಲಾಗುತ್ತಿದೆ ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ಹಾಗೂ ಪರೋಕ್ಷವಾಗಿ ತಿಳಿಸಿಕೊಡುತ್ತಾರೆ. ಇಂತಹ ಸುಳಿವುಗಳನ್ನು ಗ್ರಹಿಸಿ ಸ್ಪರ್ಧಿಗಳು ತಮ್ಮ ಆಟದ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಿರುತ್ತದೆ.