ತಮಿಳು ನಟಿ ಮಹಾಲಕ್ಷ್ಮಿ ತಮ್ಮ ಪತಿ ರವೀಂದರ್ ಚಂದ್ರಶೇಖರನ್ ಜೊತೆ ತಿರುಪತಿಗೆ ಭೇಟಿ ನೀಡಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಮದುವೆ ವೇಳೆ ಎದುರಾಗಿದ್ದ ಭಾರಿ ಟ್ರೋಲ್ಗಳನ್ನು ಮೆಟ್ಟಿ ನಿಂತಿರುವ ಈ ಜೋಡಿ, ಪರಸ್ಪರ ಕಾಳಜಿ ಹಾಗೂ ನಿಃಸ್ವಾರ್ಥ ಪ್ರೀತಿಯೇ ನಿಜವಾದ ಜೀವನ ಎಂದು ಹೇಳುವ ಮೂಲಕ ನೆಗೆಟಿವ್ ಕಾಮೆಂಟ್ಗಳಿಗೆ ತಕ್ಕ ತಿರುಗೇಟು ನೀಡಿದೆ. ತಮಿಳು ಕಿರುತೆರೆ ನಟಿ ಮಹಾಲಕ್ಷ್ಮಿ ಶಂಕರ್ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ದಂಪತಿ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. 2022ರ ಸೆಪ್ಟೆಂಬರ್ನಲ್ಲಿ ತಿರುಪತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ಮದುವೆ ಚಿತ್ರಗಳು ವೈರಲ್ ಆಗುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಪ್ರಮಾಣದ ಟ್ರೋಲ್ಗಳು ವ್ಯಕ್ತವಾಗಿದ್ದವು.