Kannadigas Jobs: Moment That Began Bengaluru IT-BT Sector Spreads Across Karnataka; What Does KRV Say. ಬೆಂಗಳೂರು: ಬೆಂಗಳೂರಿನ ಐಟಿ - ಬಿಟಿಯಲ್ಲಿ ಕನ್ನಡ ಬಳಕೆ ಕಡಿಮೆಯಾಗಿದೆ ಹಾಗೂ ಕನ್ನಡಿಗರೊಂದಿಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎನ್ನುವುದನ್ನು ವಿರೋಧಿಸಿ ಪ್ರಾರಂಭವಾಗಿದ್ದ ಅಭಿಯಾನವು ಇದೀಗ ಕರ್ನಾಟಕದಾದ್ಯಂತ ವಿಸ್ತರಿಸಿದೆ.ಐಟಿ ಬಿಟಿ ಸಂಸ್ಥೆಗಳೂ ಸೇರಿದಂತೆ ಕರ್ನಾಟಕದ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಎಷ್ಟು ಪ್ರಮಾಣದಲ್ಲಿ ನೀಡಲಾಗುತ್ತಿದೆ, ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ʻಆಗ್ರಹ ಅಭಿಯಾನʼವನ್ನು ಆರಂಭಿಸಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಟಿ.ಎ ಅವರು ಹೇಳಿದ್ದಾರೆ.