ವಿಚಿತ್ರ ಕನಸುಗಳ ನಡುವೆ ಭಯವನ್ನು ಮೆಟ್ಟಿನಿಂತು, ನಾಗಲಾಂಬಿಕೆಯ ಸಾವಿನ ಹಿಂದಿನ ರಹಸ್ಯವನ್ನು ಬಯಲಿಗೆಳೆಯಲು ಹೋರಾಡುವ ಪೂರ್ಣಿಯ ಪಾತ್ರ ಇಡೀ ಸರಣಿಗೆ ಜೀವ ತುಂಬಿದೆ. ನಂಬಿಕೆ ಮತ್ತು ಭಯದ ನಡುವಿನ ತೆಳುವಾದ ಗೆರೆಯನ್ನು ಶೋಧಿಸುತ್ತಾ ಸಾಗುವ ಈ ಸರಣಿ, ನೋಡುಗರಿಗೆ ವಿಶಿಷ್ಟ ಅನುಭವವನ್ನು ನೀಡಿದೆ. ಕನ್ನಡ ಒಟಿಟಿ ಲೋಕದಲ್ಲಿ ಥ್ರಿಲ್ಲರ್ ಸರಣಿಯೊಂದು ಅಭೂತಪೂರ್ವ ದಾಖಲೆ ಬರೆದಿದೆ. ಜೀ5 ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ಬ್ಲಾಕ್ಬಸ್ಟರ್ ವೆಬ್ ಸರಣಿ ‘ಅಯ್ಯನ ಮನೆ 2’, ಡಿಜಿಟಲ್ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದು, ಬರೋಬ್ಬರಿ 100 ಮಿಲಿಯನ್ (10 ಕೋಟಿ) ವೀಕ್ಷಣೆಯ ನಿಮಿಷಗಳನ್ನು ಯಶಸ್ವಿಯಾಗಿ ಪೂರೈಸಿದೆ.