ಚಟ್ನಿ, ಸಾಂಬರ್, ರಸಂ ಯಾವುದೇ ಭಾರತೀಯ ಅಡುಗೆಗಳಿಗೂ ಹುಣಸೆ ಹಣ್ಣು ಬೇಕೇಬೇಕು. ಅದಕ್ಕಾಗಿಯೇ ಪ್ರತಿಯೊಬ್ಬರೂ ಹೆಚ್ಚಿನ ಪ್ರಮಾಣದ ಹುಣಸೆ ಹಣ್ಣನ್ನು ಒಂದೇ ಬಾರಿಗೆ ಖರೀದಿಸುತ್ತಾರೆ. ಆದರೆ ಇದನ್ನು ಸಂಗ್ರಹಿಸುವಾಗ ಮಾಡುವ ಕೆಲವೊಂದು ತಪ್ಪುಗಳು ಹುಣಸೆಹಣ್ಣು ಹಾಳಾಗಲು ಕಾರಣವಾಗುತ್ತದೆ. ಹೀಗಿರುವಾಗ ಈ ಕೆಲವು ಟಿಪ್ಸ್ಗಳನ್ನು ಅನುಸರಿಸುವ ಮೂಲಕ ಹುಣಸೆಹಣ್ಣು ವರ್ಷಗಳವರೆಗೆ ಕೆಡದಂತೆ ಸಂಗ್ರಹಿಸಬಹುದು. ಭಾರತೀಯ ಅಡುಗೆಗಳಲ್ಲಿ ಹುಣಸೆ (Tamarind) ಕೂಡ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಪ್ರತಿನಿತ್ಯ ಹುಣಸೆಹಣ್ಣನ್ನು ಬಳಸುವ ಕಾರಣ ಮಾರುಕಟ್ಟೆಯಿಂದ ಹೆಚ್ಚಿನ ಪ್ರಮಾಣದ ಹುಣಸೆಯನ್ನು ಒಂದೇ ಬಾರಿಗೆ ಖರೀದಿಸುತ್ತೇವೆ ಮತ್ತು ಡಬ್ಬದಲ್ಲಿ ಸ್ಟೋರ್ ಮಾಡಿಡುತ್ತೇವೆ.