ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ (National Conference) ಸರ್ಕಾರವು ದೊಡ್ಡ ಮಟ್ಟದಲ್ಲಿ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದ. ಒಂದು ವೇಳೆ ತಮ್ಮ ಬೇಡಿಕೆಗಳು ಈಡೇರದಿದ್ದರೆ ರಾಜಭವನಕ್ಕೆ ತೆರಳಿ ಸರ್ಕಾರದ ಬೆಂಬಲವನ್ನು ಔಪಚಾರಿಕವಾಗಿ ಹಿಂಪಡೆಯುವುದಾಗಿ ಬಂಡಾಯ ಶಾಸಕರು ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಯಿಂದ ಒಮರ್ ಅಬ್ದುಲ್ಲಾ ನಾಯಕತ್ವಕ್ಕೆ ಅಗ್ನಿಪರೀಕ್ಷೆ ಎದುರಾಗಿದೆ.ಬಂಡಾಯ ಶಾಸಕರು ಸರ್ಕಾರದ ಸಮಗ್ರ ಬದಲಾವಣೆಗೆ ಒತ್ತಾಯಿಸಿದ್ದು, ಹಾಲಿ ಇರುವ ಎಲ್ಲ ಸಚಿವರನ್ನು ಅವರ ಖಾತೆಗಳಿಂದ ತಕ್ಷಣವೇ ಮುಕ್ತಗೊಳಿಸಬೇಕು ಮತ್ತು ಮುಖ್ಯಮಂತ್ರಿಯವರ ಸಲಹೆಗಾರರನ್ನು ವಜಾಗೊಳಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.