ವೈಲ್ಡ್ ಕಾರ್ಡ್ ಮೂಲಕ ಈಗಾಗಲೇ ಒಟ್ಟು ಐದು ಜನರನ್ನು ಮನೆ ಒಳಗೆ ಕರೆದುಕೊಂಡು ಬರಲಾಗಿದೆ. ಆದರೆ ಹೀಗೆ ಬಂದವರು ಮನೆಯ ಇತರೆ ಸ್ಪರ್ಧಿಗಳ ಜೊತೆಗೆ ಹೊಂದಿಕೊಂಡು, ಅವರಷ್ಟೆ ವೇಗವಾಗಿ ಆಟ ಆಡುವಲ್ಲಿ ಎಡವುತ್ತಿದ್ದಾರೆ. ಬಂದ ಐವರು ವೈಲ್ಡ್ ಕಾರ್ಡ್ ಎಂಟ್ರಿಗಳಲ್ಲಿ ಇದೀಗ ಇಬ್ಬರು ಹೊರಗೆ ಹೋಗಿದ್ದಾರೆ. ಅದರಲ್ಲೂ ಎರಡನೇ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರು ಬಂದಷ್ಟೇ ವೇಗವಾಗಿ ಮನೆಯಿಂದ ಹೊರನಡೆದಿದ್ದಾರೆ. ಕಳೆದ ವಾರ ಲಕ್ಷ್ಮಿ ಅವರು ಹೊರಗೆ ಹೋಗಿದ್ದರೆ ಈ ವಾರ ಕುಮಾರಿ ಹೊರಗೆ ಹೋಗಿದ್ದಾರೆ.