ಕರ್ನಾಟಕ ಹವಾಮಾನ ಮುನ್ಸೂಚನೆ: ಇಂದು ಬೆಂಗಳೂರು ನಗರ-ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ. ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ನೀಡಲಾಗಿದ್ದು, ನವೆಂಬರ್ 5ರವರೆಗೆ ರಾಜ್ಯದಲ್ಲಿ ಬಿರುಗಾಳಿ ಮತ್ತು ಮಿಂಚಿನ ಸಾಧ್ಯತೆ ಇದೆ. ಬೆಂಗಳೂರು, ನವೆಂಬರ್ 2: ಚಳಿ ಆರಂಭದ ಮುನ್ಸೂಚನೆ ಬೆನ್ನಲ್ಲೇ ರಾಜ್ಯದಲ್ಲಿ ಇದೀಗ ಮುಂದಿನ ಕೆಲವು ದಿನಗಳ ಕಾಲ ಮಳೆ ಹಾಗೂ ಗುಡುಗು-ಮಿಂಚಿನ ವಾತಾವರಣ ಮರಳುವ ಸಾಧ್ಯತೆ ಇದೆ. ಇಂದು (ನವೆಂಬರ್ 2) ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.